ಅದು ಬೆಳಗಿನ ಏಳರ ಸಮಯ
ಬಸ್ಸಿನ ಮುಂದಿನಿಂದ ಅಪ್ಪಳಿಸುತಿತ್ತು
ಭಾಸ್ಕರನ ಕಿರಣಗಳು
ಒಮೆ ಕಣ್ಮುಚಿದ ತಕ್ಷಣ ಕಂಡದ್ದು
ಇಬ್ಬರೇ ಹೋಗುವಂತ ಒಂದು ದಾರಿ
ಆ ದಾರಿಯ ಎರಡು ಬದಿಯಲ್ಲಿ
ಆಗತಾನೆ ಚಿಗುರಿದ ಪುಟ್ಟ ಸಸಿಗಳು
ದಾರಿಯ ತುಂಬಾ ರವಿಯ ರಸ್ಮಿಗಳೇ
ಯಾರೋ ನನ್ನ ಮುಂದೆ ಹೋದಂತ್ತಾಯಿತು
ಯಾರೆಂಬುದು ಕಾಣಲಿಲ್ಲ
ಮರುಕ್ಷಣವೇ ಪುಟ್ಟ ಗಿಡಗಳು ದೊಡ್ಡದಾಗಿ
ಹೂವು ಕಾಯಿ ಬಿಟ್ಟು
ತೆಗೆದುಕೋ ಇದೆಲ್ಲ ನಿನ್ನದೆಂದಿತು