Tuesday, October 25, 2011

ದೀಪಾವಳಿಯಲ್ಲಿ ಅದ್ಯಾವ ಕಾರಣಕ್ಕೆ ದೀಪಗಳನು ಬೆಳಗಿಸಬೇಕು ?

ನಮಲ್ಲಿ  ದೀಪಾವಳಿ ಹಬ್ಬದ ದಿವಸದಿಂದ ಮನೆಯಲ್ಲಿ ಆಗು ಮನಯ ಅಂಗಳದಲ್ಲಿ ದೀಪಗಳನ್ನು ಬೆಳಗಿಸುವ ವಾಡಿಕೆ ಇದೆ. ಆದರೆ ಇವೆಲ್ಲ ಬರಿ ಒಂದು ತಿಂಗಳ ಮಟ್ಟಿಗೆ ಏಕೆ ?,
 ಅದ್ಯಾವ ಕಾರಣಕ್ಕೆ ದೀಪಗಳನು ಬೆಳಗಿಸಬೇಕು ?
ದೀಪವನ್ನು ಆಕಳಿನ  ಸಗಣಿ  ಉಂಡೆಯ ಮೇಲೆ ಏಕೆ ಇಡಬೇಕು ?, 
ಎಣ್ಣೆ ದೀಪವನ್ನೇ ಏಕೆ ಅಚ್ಚಬೇಕು ?..........
                                                      ಇವೆ ನನಗೆ ಕಾಡುತಿದ್ದ ದೀಪಾವಳಿಯ  ಪ್ರಸ್ನೇಗಳು...
 
 ಇಂತಹ  ಪ್ರಸ್ನೆಗಳಿಗೆ   ಉತ್ತರ ಉಡುಕುತ್ತಹೋದಂತೆ  ವೈಜ್ಞಾನಿಕವಾಗಿಯೆ ಉತ್ತರಗಳು ದ್ವರುಕುತ್ಹ್ವೆ.
ದೀಪಾವಳಿ ಮಾಸ ಅಂದರೆ ಅಕ್ಟೋಬರ್-ನವೆಂಬರ್ ಮಹೇ , ಈ ಕಾಲದಲ್ಲಿ ಬಹುತೇಕ  ಪೈರು ನಮ್ಮ  ಹೊಲ,ಗದ್ದೆ,ತೋಟಗಳಲ್ಲಿ ಕಂಗೊಳಿಸುತಿರುತ್ವೆ ಇದರ ಇಂದೇ ರೈತನ ಪರಿಶ್ರಮಕೂಡ ಇದೆ.

 ನಮಲ್ಲಿ ಇದು ರಾಗಿ ತೆನೆಗುಡುವ ಸಮಯ(ಗ್ರೈನ್ ಫಿಲ್ಲಿಂಗ್ ಸ್ಟೇಜ್)  ,
 ಅಷ್ಟರಮಟ್ಟಿಗೆ ಬೆಳಯ ಬೇಕಾದರೆ ಬೂಮಿ ತಯಾರಿಯಿಂದ   ಇಡಿದು
ಕಳೆ ಕೀಳುವುದು,
ಗೊಬ್ಬರಕೊಡುವುದು,
ನೀರಾಯುಸುವುದು ,
ಕ್ರಿಮಿ-ಕೀಟಗಳಿಂದ ಬೆಳೆಗಳನು ಸಂರಕ್ಷಿಸುವುದು ಅತ್ಯಗತ್ಯ.
          
 ನಮ್ಮ ಪೈರಿಗೆ ಹಾನಿಮಾಡುವ ಕೀಟಗಳಲ್ಲಿ ಬಹುತೇಕ  ಪತಂಗಗಳ ಲಾರ್ವಗಳೇ ಹೆಚ್ಚು .
 ಪ್ರಕೃತಿಯಲ್ಲಿ  ಲಾರ್ವಗಳು, ಪತಂಗಗಳು ಇಟ್ಟ  ಮಟ್ಟೆಗಳಿಂದ ವರಬಂದು ಸಸ್ಯಗಳನ್ನು ತಿನುವುದುಂಟು. ಒಂದು ಪತಂಗ
೮೦ ರಿಂದ ೮೦೦ ಕೂ
ಎಚ್ಚು ಮಟ್ಟೆಗಳನ್ನೂ ಇಡುವುದುಂಟು.
 ಪತಂಗಗಳದ್ದು ಬೆಳಕಿನೆಡೆಗೆ ಆಕರ್ಶಿತವಗುವುದು ಇದರ ಸ್ವಬಾವ .

ಕತ್ತಲಲ್ಲಿ ಬೆಳಕು ಕಂಡ ತಕ್ಷಣ ಈ ಕೀಟಗಳು ಬೆಳಕಿನೆಡೆಗೆ ಚಲಿಸುತ್ವೆ . ಅದೇ ಬೆಳಕು ದೀಪದಿಂದ ಬರುತಿದ್ದರೆ ಈ ಕೀಟಗಳು ದೀಪದ ಬೆಂಕಿಗೆ ಸಿಕ್ಕಿ ಸಾಯುವುದು ಕಡಾಕಂಡಿತವೆ ಸರಿ .
 ಒಂದು ಇಂಥ ಪತಂಗಗಳು ನಾಶವಾದರೆ ಎಸ್ಟೋ ಲಾರ್ವಗಳು ನಾಶವಾದಂತೆ.

ಎಣ್ಣೆಇಂದ ಹಚ್ಚಿದ ದೀಪಗಳು ನಿದಾನವಾಗಿ ರಾತ್ರಿವಿಡಿ ಉರಿಯುವುದುಂಟು .
 ಈ ದೀಪದ ಬೆಂಕಿ ರಾತ್ರಿವಿಡಿ ಕೀಟನಿಂತ್ರಿಸುವಲ್ಲಿ ಉಪಯೋಗಕರವಾಗಿದೆ.
ಇಲ್ಲಿ ಯಲ್ಲ ಕೀಟಗಳು ಬರಿ ಬೆಂಕಿಂದಲೇ ಸಾಯುವುದಿಲ್ಲ.
 ಕೆಲವು ಕಾಲ್ಗಳನ್ನು ಅಥವಾ
ರೆಕ್ಕೆಗಳನ್ನು  ಸುಟ್ಕೋಲ್ತ್ಹವೆ, ಇನ್ಕೆಲ್ವು ಎಣ್ಣೆಲಿ ಬೀಳ್ತವೆ.

ಕೆಲವು ಕೋಲಿಯಪ್ಟೆರನ್ ಕೀಟಗಳು ಸಗಣಿಗೆ ಆಕರ್ಶಿಸುವುದುಂಟು ,
ಆಗೆ ಆಕರ್ಶಿತವಾದ ಕೀಟ ಬೆಂಕಿಯಲ್ಲಿ ಸುಟ್ಟು ಸಾಯುವುದು .
 ಎಲ್ಲ ಕೀಟಗಳು ಒಂದು ಅಥವಾ ಎರಡೇ ದಿನದಲ್ಲಿ  ಪ್ಯು ಪ  ಅವಸ್ತೆ ಇಂದ ಅಡಲ್ಟ್ ಅವಸ್ತೆಗೆ 
 ಒಂದೇ ಸಮಯದಲ್ಲಿ ಬರುವುದಿಲ್ಲ,
 ಈಗೆ  ಪ್ಯು ಪ    ಅವಸ್ತೆಯಿಂದ ವರಬಂದ ಮಾತ್(ಪತಂಗ)/ಬೀಟಲ್ಗಳು ಮಟ್ಟೆ ಇಡುವ ಮುಂಚ್ಹೇನೆ ನಾಶವಾದರೆ ನಮ್ಮ ಬೆಳೆಗಳು ನಮಗೆ ಸಿಗುತ್ವೆ .
"ಕೈ ಬಂದಿದ ತುತ್ತು ಬಾಯಿಗೆ ಬರುತ್ತೆ "                

ಯಲ್ಲರೂ ಅರ್ಥಪೂರ್ಣವಾಗಿ ದೀಪಾವಳಿ ಹಬ್ಬವನ್ನು ಆಚರಿಸೋಣ

                                      ದೀಪಾವಳಿ ಹಬ್ಬದ ಶುಭಾಷಯಗಳು