Thursday, December 12, 2013

ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ,
ಪರೀಕ್ಷೆ ಕಾಲದಲ್ಲಿ ವಿಧ್ಯಾಭ್ಯಾಸ ...... 

Monday, April 22, 2013

ನಾ ಕಂಡ ದಾರಿ

ಬಸ್ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದೆ 
 ಅದು ಬೆಳಗಿನ ಏಳರ ಸಮಯ 
ಬಸ್ಸಿನ ಮುಂದಿನಿಂದ ಅಪ್ಪಳಿಸುತಿತ್ತು 
ಭಾಸ್ಕರನ ಕಿರಣಗಳು 
ಒಮೆ ಕಣ್ಮುಚಿದ ತಕ್ಷಣ ಕಂಡದ್ದು 
ಇಬ್ಬರೇ ಹೋಗುವಂತ ಒಂದು ದಾರಿ
ಆ ದಾರಿಯ ಎರಡು ಬದಿಯಲ್ಲಿ 
ಆಗತಾನೆ ಚಿಗುರಿದ ಪುಟ್ಟ ಸಸಿಗಳು  
ದಾರಿಯ ತುಂಬಾ ರವಿಯ ರಸ್ಮಿಗಳೇ 
ಯಾರೋ ನನ್ನ ಮುಂದೆ ಹೋದಂತ್ತಾಯಿತು 
ಯಾರೆಂಬುದು ಕಾಣಲಿಲ್ಲ 
ಮರುಕ್ಷಣವೇ ಪುಟ್ಟ ಗಿಡಗಳು ದೊಡ್ಡದಾಗಿ 
ಹೂವು ಕಾಯಿ ಬಿಟ್ಟು 
 ತೆಗೆದುಕೋ ಇದೆಲ್ಲ ನಿನ್ನದೆಂದಿತು        

Tuesday, April 16, 2013

ಅಪರೂಪದ ಅತಿಥಿ


           ನಮ್  ಕ್ಯಾಂಪಸ್ಗೆ  ಭೇಟಿ ನೀಡೋ ಅಪರೂಪದ ಅತಿಥಿ, ನೋಡಲು ಬಹು ಸುಂದರವಾಗಿದ್ದು, ಒಮ್ಮೆ ನೋಡಿದರೆ ನೋಡುತಿರಬೇಕೆಂಬ ಹಂಬಲ. ಅವರನ್ನು ನೋಡಿದ್ದು ಖರನಾಮ ಸಂವತ್ಸರದ ಪಾಲ್ಗುಣ ಮಾಸದಲ್ಲಿ. ಅವರು ರಾಜರಂತೆ ಕಾಣುತಿದ್ದರು, ಅವರ ತಲೆ , ಜುಟ್ಟು, ಕಪ್ಪಾಗಿ ಹೊಳೆಯುವ ಕಿರೀಟದಂತಿತ್ತು. ಆದರೆ ಅವರದು   ಹೊಳೆಯುವ ಅಚ್ಚಬಿಳಿ ದೇಹ ಕಂಡು ಆಚರಿಗೊಂಡು ನನ್ನ ಗೆಳೆಯನಾದ ಗಿರೀಶನಿಗೆ ಕರೆದು ತೋರಿಸಿದೆ. ಅವನು ಅವರನ್ನು ತನ್ನ ಮೊಬೈಲ್ನಿಂದ ಫೋಟೋ ತೆಗೆಯಲು ಮುಂದಾದ ತಕ್ಷಣವೆ ಅಲಿಂದ ಎದ್ದು ಮುನ್ನೆಡೆದರು, ನಾವು ತರಾಸಿನಲ್ಲಿದುದ್ದರಿಂದ  ಹಿಂಬಾಲಿಸಲಾಗಲಿಲ್ಲ.


        ಇವರು ಮತ್ತೆಂದು ನನಗೆ ಕಾಣಸಿಗಲಿಲ್ಲ, ಆದರೆ ಸರಿಯಾಗಿ ಒಂದು ವರ್ಷದ ಬಳಿಕ ನನ್ನ ಗೆಳೆಯರಾದ ರಘು, ಪವನ್ ಮತ್ತು ಅಶ್ವಿನ್ ಮೂವರು ಕೂಡಿ ಬಟಾನಿಕಲ್ ಗಾರ್ಡನ್  ಬಳಿ ಹೊಗುತ್ತಿರುವಾಗ ಇವರನ್ನು ಮೊದಲಬಾರಿಗೆ ನೋಡಿ ಅಚ್ಚರಿಗೊಂಡರು. ಅವರಿಗೂ ಕೂಡ ಅವರು ಯಾರೆಂದು ತಿಳಿಯದೆ  ಕುತೂಹಲಕೊಳಗಾದರು. ನಾನು ಮತ್ತು ರಘು ಅವರ ಚಿತ್ರ ಬಿಡುಸುವಲ್ಲಿ ಮುಂದಾದೆವು ಆದರೆ ಅವರು ಯಾರು, ಹೆಸರೇನು, ಎಲ್ಲಿಂದಾ ಬಂದದ್ದು  ಎಂಬುದೇ ತಿಳಿಯಲಾಗಲಿಲ್ಲ. ನಾವು ಬಿಡಿಸಿದ ಚಿತ್ರವನ್ನು ಪ್ರೊಫೆಸರ್ ಸುಬ್ರಮಣ್ಯ ಅವರಲ್ಲಿಗೆ ತೆಗೆದುಕೊಂಡು ಹೊದ ತಕ್ಷಣವೇ ತಿಳಿದಿದ್ದು ಅದು ರಾಜಹಕ್ಕಿ(ರಾಜನೂಕರೆ) ಎಂದು.ಇದನೇ  ಇಂಗ್ಲೀಷ್ನಲ್ಲಿ ಏಷ್ಯನ್ ಪ್ಯಾರಡೈಸ್ ಫ್ಲೈಕ್ಯಚರ್ ಎನ್ನುವರು, ಇವು ಸುಮಾರು ೧೯-೨೨ ಸೆಂಮೀ. ಉದ್ದವಿದ್ದು  ಗಂಡಿಗೆ- ತಲೆ, ಜುಟ್ಟು, ಗಲ್ಲ ಕಪ್ಪಾಗಿದ್ದು, ಹೊಳೆಯುವ ಅಚ್ಚಬಿಳಿ ದೇಹ, ಎಲ್ಲಕ್ಕಿಂತ ಮಿಗಿಲಾಗಿ, 50 ಸೆಂಮೀ ಉದ್ದನಾದ ಬಾಲದ ಎರಡು ಬಿಳಿ ಗರಿಗಳು.  ಹೆಣ್ಣಿಗೆ ಮತ್ತು ಎಳೆವಯಸ್ಸಿನ ಗಂಡು ಹಕ್ಕಿಗೆ, ಕೆಂಗಂದು ಮೇಲ್ಮೈ ಇರುವುದು. 


       ಇವುಗಳದ್ದು ಕಿರಿದಾದ ಕಾಲುಗಳು ಅದರೆ ಬಹಳ ನೇರವಾಗಿ ಕುಳಿತುಕೊಳ್ಳಬಲ್ಲದು, ಮತ್ತು ಇವು ಕೀಟಭಕ್ಷಕಗಳಾಗಿದ್ದು ಮಧ್ಯಾಹ್ನಾದ ವೇಳೆಯಲ್ಲಿ ನೀರಿನ ಸಣ್ಣ ಕೊಳಗಲ್ಲಿ ಸ್ನಾನ ಮಾಡಲು ಆತೋರೆಯುತಿರುತ್ತವೆ. ಏಷ್ಯನ್ ಪ್ಯಾರಡೈಸ್ ಫ್ಲೈಕ್ಯಚರ್ ಭಾರತದಾದ್ಯಂತ ದಟ್ಟವಾದ ಕಾಡು ಮತ್ತು ಚೆನ್ನಾಗಿ ಅರಣ್ಯ ಆವಾಸಸ್ಥಾನಗಳಲ್ಲಿ ವಾಸಿಸುತ್ತವೆ .  ಅವು ವಲಸೆ ಪಕ್ಷಿಗಳು ಮತ್ತು ಚಳಿಗಾಲದ ಋತುವಿನಲ್ಲಿ ಉಷ್ಣವಲಯದ ಏಷ್ಯಾದಲ್ಲಿ ಕಾಲ ಕಳೆಯುತ್ತವೆ.ಇವು  ಸ್ಥಳೀಯವಾಗಿ ದಕ್ಷಿಣ ಭಾರತ ಮತ್ತು ಶ್ರೀಲಂಕಾಕೆ ಸೇರಿದ್ದಗಿವೆ, ಆದ್ದರಿಂದ ಭೇಟಿ ನೀಡುವ ವಲಸೆ ಮತ್ತು ಸ್ಥಳೀಯ ಹಕ್ಕಿಗಳು ಈ ಪ್ರದೇಶಗಳಲ್ಲಿ ಹೆಚ್ಚಾಗಿ  ಕಾಣಬರುವವು. 

 
           Linné ನ ಪ್ರಕಾರ  ಏಷ್ಯನ್ ಪ್ಯಾರಡೈಸ್ ಫ್ಲೈಕ್ಯಚರ್ ಕೇವಲ ಭಾರತದಲ್ಲಿ ಕಂಡುಬಂದಿದ್ದವು. ನಂತರ ಪಕ್ಷಿವಿಜ್ಞಾನಿಗಳು ಈ ನಯನಮನೋಹರ ಹಕ್ಕಿಯನ್ನು ಇತರ ಏಷ್ಯನ್ ರಾಷ್ಟ್ರಗಳಲ್ಲಿ ಗಮನಿಸಲಾಯಿತು. ಅದೇನೆಆಗಲಿ ಈ ಹಕ್ಕಿ ನಮ್ ಕ್ಯಾಂಪಸ್ನಲ್ಲಿ ಎಸ್ಟೋ ಬಾರಿ ಭೇಟಿ ನೀಡಿದೆಯೋ ಲೆಕ್ಕವಿಲ್ಲ ಆದರೆ ಕಾಕತಾಳಿಯವೆಂಬಂತೆ ನಮ್ ಕಣ್ಣಿಗೆ ಗೋಚರಿಸಿದ್ದು ಸರಿಯಾಗಿ ಒಂದು ವರ್ಷದ ನಂತರವೇ ಒಂದು ದಿನ  ಹೆಚ್ಚಿಲ್ಲ ಕಡಿಮೆಯಿಲ್ಲ. ಕೊನೇಗೂ ನನ್ ಕ್ಯಾಮೆರಾಗೆ ಸಿಕ್ಕ ಅಪರಿಚಿತ ಪಕ್ಷಿಯ ಪರಿಚಯವಾದಂತಾಯಿತು. 

 


Sunday, January 20, 2013

ಪುಷ್ಯ ಮಾಸ

ಪುಷ್ಯ ಮಾಸದ  ಬಾಲ ಸುರ್ಯನಿಲ್ಲ
ಆದರೆಂತು ಅದೇ ಬೆಳಕು
ಮುಂಜಾವಿನ ಮಂಜಲ್ಲಿ
ದಿವಾಕರನಿಗೊಂದು ನಮನ

ಹಕ್ಕಿಗಳ ಇಂಪಾದ ಗಾನ
ಅದಕೊಂದಿಸ್ಟು  ಗಾಳಿಯ ವಾದ್ಯ
ಚಳಿಗೆಂದು ಮುಚಿದ ಕಿವಿ ತೆರೆದು
ಆಲಿಸಿ ನೋಡ

                                        - ಪ್ರಭು